ಕಣಕಣದೆ ಶಾರದೆ
ಮಧು ಬಾಲಕೃಷ್ಣ
ಕವಿರಾಜ್
ಗುರುಕಿರಣ್
ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹು ಕುಹು ಗಾನ
ಝರಿ ಝರಿಯಲ್ಲು, ಜುಳು ಜುಳು ಧ್ಯಾನ
ವಿಧ ವಿಧದ ನಾದ ಅವಳು ನುಡಿಸುತಿಹಳು || ಪ ||
ಜನನಕು ಹಾಡು ಮರಣಕು ಹಾಡು
ದಾರಿ ಚರಮಗಳು
ಪ್ರತಿ ಎದೆಯಾಳದೊಳು ಲಯ ತಾಳ
ಈಕೆ ಬದುಕಿರಲು
ಕೊರಳಿನಲಿ, ಕೊಳಲಿನಲಿ,
ಒಲಿದು ಉಲಿದು ನಲಿದು ಹರಿದು
ಬರುವುದು ಶೃತಿಲಯವು || ೧ ||
ಕುಲ ನೆಲದಾಚೆ ಅರಿಯುವ ಭಾಷೆ
ಒಂದೇ ಜಗದೊಳಗೇ
ಅವರಿವರಿಲ್ಲ ಸರಿಸಮರೆಲ್ಲ
ಸಪ್ತಸ್ವರಗಳಿಗೇ
ನಿಪಮಪನಿ.. ಸನಿಪನಿಸ
ಗಸನಿಸಗ.. ಮಪಮಪಗ
ನಿಮಪಮ.. ಸನಿಪನಿ.. ಗಸನಿಸ || ೨ ||